ಈ ದಿನವೇ ಅಲ್ಲವೇ ಯುಗ ಆರಂಭವಾಗಿದ್ದು ? ನಮ್ಮ ಹಿರಿಯರು ದಿನ ವಾರ ತಿಂಗಳು ವರ್ಷಗಳ ಎಣಿಕೆಗೆ ಗುರುತು ಹಾಕಿದ್ದು, ಪ್ರಕೃತಿಯ ವಿವಿಧ ಬದಲಾವಣೆಗೆ ಕಾರಣವಾಗುವ ಈ ಆರಂಭ ಮನುಷ್ಯನ ಮೇಲಷ್ಟೆ ಅಲ್ಲ, ಎಲ್ಲ ಜೀವಿಗಳಲ್ಲಿ ನವ್ಯತೆಯನ್ನ ತಂದು ಕೊಟ್ಟು, ಬದುಕು ಕಷ್ಟ-ಸುಖಗಳ ಹೂರಣವೆಂದು, ಅವುಗಳದೇ ಲೋಕದಲ್ಲಿ ಪ್ರೀತಿಯಿಂದ ಸ್ನೇಹದಿಂದ ಹಾಡಲು ಸಹಕರಿಸುವುದು ನಿಜಕ್ಕೂ ಅದ್ಭುತವೇ ಸರಿ !
ಯುಗಾದಿಯ ಹೊಸ್ತಿಲಲ್ಲಿ
-------------------------
ಯುಗದ ಆದಿಯಿದು
ತಿರುಗೋ ಭುವಿಯ ಪ್ರೇಮವಿದು
ಒಲಿದು ಹೊಳೆವ ಸೃಷ್ಟಿಯ ಚೆಲುವಿದು
ಮಣ್ಣಿನಲ್ಲಿ ಮಿಂದುದ ಸಾಕೆಂದು
ಅನ್ನ ನೀಡುವವ ಬಂದು ನಿಂತನು ಊರಿನಲಿ ಹೊತ್ತು ಕಳೆಯಲು
ನೆವ ಬೇಕಿತ್ತು, ಹುಡುಕಿದನು...
ಕಂಡನು ಆಟಗಳ, ಜಾತ್ರೆಗಳ, ಮೋಜು ಮಸ್ತುಗಳ
ಹಂಚಿಕೊಳ್ಳಲು ಸಿಹಿ-ಕಹಿಗಳ, ಈ ಬಾಳಿನಲ್ಲಿ ಎಲ್ಲ ಸಮಪಾಲು
ಮನುಜನಿಗಷ್ಟೆ ಸೀಮಿತವಲ್ಲ ಬಯಕೆಗಳು
ಬಸಿರಾಗಿ, ಹಸಿರಾಗಿ ಚಿಗುರುವಾಸೆ ಒಣಗಿದ ಗಿಡ-ಮರ-ಬಳ್ಳಿಗಳಿಗೆ
ಬಿಸಿಲೊಡನೆ ವಿರಹ ಮರೆತ ಗಾಳಿ ಬೀಸಲು
ತಂಪಾಯಿತು ಉರಿದ ನೆಲವು
ಹರಿಯುತ್ತ ಮುಂಜಾನೆಯ ಆಗಸವು
ವೈವಾರದಿಂದ ರವಿಯನ್ನ ತನ್ನೆಡೆಗೆ ಸೆಳೆದುದ
ಕಣ್ತುಂಬಿ ನೋಡಿ ಹಾರಿದವು ಹಕ್ಕಿ ಸಂಕುಲ
ಸಾರುತ್ತ ಜೊತೆಯಲಿ ಇದು ವಸಂತ ಗಾನ ವೆಂದು ಚೈತ್ರ ಕಾಲವೆಂದು....
ಅರ್ಥವಾಗಲಿಲ್ಲವೇ ನಿಮಗೆ ?
ಇಂದು ಯುಗಾದಿ ಎಂದು
-ಕವೆಂಪ
ಹೊಸ ಕಾಲ ಬಂದಿದೆ ಈಗ, ಹೊಸ ದಿನಗಳು ಹೊಸ ಹುರುಪು ನೀಡಿ, ಹೊಸ ಸಾಧನೆಗಳಿಗೆ ಸ್ಪೂರ್ತಿಯಾಗಲಿ ದಿನ ದಿನವೂ. ಈ ದಿನ ಬೇವು ಬೆಲ್ಲ ಸವಿದು ಸಿಹಿ-ಕಹಿಗಳ ರುಚಿಯ ಅರಿಯಿರಿ, ಈ ಹಾಡಿನೊಂದಿಗೆ ನಿಮಗೆಲ್ಲ ಉಗಾದಿಯ, ಹೊಸ ವರ್ಷದ ಹಾರ್ಧಿಕ ಶುಭಾಶಯಗಳು.
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ಸಹೃದಯಿಗಳೇ, ನೆನಪಿಡಿ, ನಿಮ್ಮ ಅನಿಸಿಕೆ ನನ್ನ ಬರಹಗಳಲ್ಲಿನ ಕೊರತೆಗಳಿಗೊಂದು ಲಸಿಕೆ