ನನ್ನ-ನನವಳ ಮಧ್ಯೆ ನಡೆದ, ಕೆಲ ಆತ್ಮೀಯರ ಜೀವನದ ಸಿಹಿ ಕಹಿ ಘಟನಾವಳಿಗಳ ನೆನೆಯುತ್ತಿರುವಾಗ ನನ್ನಲ್ಲಾದ ಅನುಭವಗಳು ನನ್ನ ಲೇಖನಿಯ ಸೆರೆ ಸಿಕ್ಕು ಕಂಡ ಒಂದು ರೂಪವನ್ನು ನಿಮ್ಮೆದುರಿಗಿಡಲು ಬಯಿಸಿದೆ.
ಅರಿವು-ಒಲವು
------------
ಎಳೆಯುತಿದೆ ಎದೆಯೊಳಗೆ ನೆನಪೊಂದು
ಸೆಳೆಯುತಿದೆ ನಿನ್ನೆಡೆಗೆ
ಕಳೆದುಕೊಂಡು ಸಲಿಗೆಯ ದೂರವಾದ ಸ್ನೇಹವ
ಭಾರದಿಂದ ಬಳಲಿದ ಹೃದಯದ ಒಳೊಲುಮೆ
ಅಹಮಿನ ಕುಲುಮೆಯಲ್ಲಿ ನರಳಿದೆ
ಮುನಿಸು ಮನಸುಗಳು ಎತ್ತರಕೆ ಬೆಳೆದು
ಕಳೆದ ಕಾಲಗಳಲ್ಲಿ ಬಲಿತ ಭಾವಗಳ ಕೊಂದು
ಗಹಗಹಿಸಿ ನಕ್ಕು ಅಳುವನ್ನಾಳಿವೆ
ಕೆದಕುತ್ತವೆ ಹೂಬಳ್ಳಿಯ ಮುಳ್ಳುಗಳು
ಕಲಕುತ್ತವೆ ಹಾಲುಜೇನ ಆನಂದವನು
ಕಂಡ ಎಲೆಯ ಹಸಿರು ಒಣಗುತ್ತಿದೆ
ಬುಡವ ಬಿಡದ ಬೇರು ಉಸಿರ ನೀಡುತ್ತಿದೆ
ಬಿಸಿಲೇರಿ ತಂಪಾಗಿದೆ
ಮಳೆ ಬಂದು ನಿಂತಾಗಿದೆ
ಚಳಿ ನಡುಗಿಸಿ ಬಿಟ್ಟಿದೆ
ಏರಿದ ತಾಪ ಇಳಿಯುತ್ತಿದೆ ಸಹಜವಾಗಿ
ಜಡವಾಗಿ ಬಡವಾಗಿ ಮುಚ್ಚಿದೆದೆಯ ಕದವ ತೆರೆದು
ಸರಿ-ಬೆಸಗಳ ಗೊಂದಲಗಳ ನಿದಿರೆಗೆ ಸರಿದಂತರಂಗವ
ಬಡಿದು ಎಬ್ಬಿಸಿದವು ಜೀವತರಂಗಗಳು
ಕತ್ತಲೆಯನ್ನು ಬೆತ್ತಲೆಗೊಳಿಸಿ ಬಯಲೊಳು ನೂಕಿ ಓಡಿಸಿ
ಒಂದಾದವು ಆತ್ಮಗಳು ಅರಿವಿನ ಸ್ಪರ್ಷದಲಿ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ
ಸಹೃದಯಿಗಳೇ, ನೆನಪಿಡಿ, ನಿಮ್ಮ ಅನಿಸಿಕೆ ನನ್ನ ಬರಹಗಳಲ್ಲಿನ ಕೊರತೆಗಳಿಗೊಂದು ಲಸಿಕೆ